ದಿನಾಂಕ 23 ಮೇ - ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿ » Shri Kshethra Hiremath, Tumkur

ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು.

Good Morning, Happy Saturday, 24th May 2024 @ Hiremath, TapOvanam,  Tumkur

ನಿನ್ನೆಯಿಂದ ಕಾರ್ಯಕ್ರಮ ಶುರುವಾಗಿದೆ.
ನಿನ್ನೆಯ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ವಿಯಾಯಿತು.
ಭಕ್ತದೇವರುಗಳು ತೃಪ್ತರಾದರು.

ಭಕ್ತರು ತೃಪ್ತಿಯಿಂದ ತುಂಬಿ ತುಳುಕಿದರು.

ಹಿರೇಮಠದ ಒಳಗೆ, ಹೊರಗೆ ಸುತ್ತಮುತ್ತ
ಅಕ್ಕಪಕ್ಕ ಹಬ್ಬವೋ ಹಬ್ಬ
ಮತ್ತು ಹಬ್ಬದ ವಾತಾವರಣ!!

ಹಿರೇಮಠ ಒಳಾಂಗಣ,
ಹೊರಾಂಗಣವೆಲ್ಲ ಮಂತ್ರಮಯ!!

ಸುಮಾರು 20ಕ್ಕಿಂತಲೂ
ಹೆಚ್ಚು ಜನ ಶಾಸ್ತ್ರಿಗಳ ನೇತೃತ್ವದಲ್ಲಿ
ಮಲ್ಲಿಕಾರ್ಜುನ ಮಹಾಸ್ವಾಮಿಯ
ಪುನಃ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿದೆ.

ಹಿರೇಮಠದ ಮೇಲಿರುವ
ಅವರ ಪ್ರೀತಿ, ಅಭಿಮಾನಕ್ಕೆ ಎಣೆ ಇಲ್ಲ.

ಅವರೆಲ್ಲ ಜೊತೆಗೂಡಿ ಮಂತ್ರಗಳನ್ನು ಹೇಳುವಾಗ
ಭಕ್ತರಿಗೆಲ್ಲ ಆನಂದವೋ ಆನಂದ.

ಭಕ್ತರೆಲ್ಲರೂ ಮಂತ್ರಮುಗ್ಧರಾದರು.

ಅಷ್ಟೊಂದು ಜನ ತಾಯಂದಿರು
ಗಂಗೆ ತೆಗೆದುಕೊಂಡು ಬರುತ್ತಿದ್ದರೆ
ನೋಡಲೆರಡು ಕಣ್ಣು ಸಾಲದು.

ಎಲ್ಲರ ಕಾಲುಗಳು
ಖುಶಿಯಿಂದ ಕುಣಿಯುತ್ತಲಿದ್ದವು.

ಮನಸ್ಸು ಆ ಅಮೃತಘಳಿಗೆಯ ಆನಂದವನ್ನು
ಆಸ್ವಾದಿಸುತ್ತಲಿತ್ತು.

ಚಿಕ್ಕಪೇಟೆ ಮತ್ತು ಕೋಟೆ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ
ಟ್ರಾಫಿಕ್ ಜಾಮು!!

ಎಲ್ಲವೂ ಚೆನ್ನಾಗಿತ್ತು.
ಎಲ್ಲವೂ ಚೆನ್ನ ಚೆನ್ನ,
ಎಲ್ಲವೂ ಚೆಲುವು, ಚೆಲುವು!!

ದಾಸೋಹಭವನದಲ್ಲಿ
ಹಾಲು ಉಕ್ಕಿಸಿಯಾಯಿತು.

ಎಲ್ಲವೂ ತುಂಬ ಅಚ್ಚುಕಟ್ಟಾಗಿ
ಶಿಸ್ತಬದ್ಧಾಗಿ ನಡೆದುಬಂತು.

ನೂತನ ಮಲ್ಲಿಕಾರ್ಜುನಸ್ವಾಮಿಯ ವಿಗ್ರಹವನ್ನು
ಧಾನ್ಯಾಧಿವಾಸಕ್ಕೆ ಕಳುಹಿಸಲಾಯಿತು.

ಡಾ. ಶ್ರೀ ಶಿವಾನಂದ ಶಿವಾಚಾರ್ಯ ಶ್ರೀಗಳು
ಹಿರೇಮಠ, ತಪೋವನ, ತುಮಕೂರು




Categories:





Related Posts

sample news
Some text
೮೩ರ ಗಡಿಯಲ್ಲಿ ಅಡಿ ಇಟ್ಟ ಶ್ರೀ ತೀತ ಮಲ್ಲಿಕಾರ್ಜುನರವರಿಗೆ ಜನ್ಮವರ್ಧಂತಿಯ ಶುಭಾಶೀರ್ವಾದಗಳು
ಮೊನ್ನೆ ಮಾರ್ಚ್ ೧೬, ಸೋಮವಾರ. ನಮ್ಮ ಮಠದ ಪರಮಾಪ್ತಭಕ್ತರಾದ ಶ್ರೀ ತೀತ ಮಲ್ಲಿಕಾರ್ಜುನರವರ ಜನ್ಮದಿನ. ಅವರಿಗೆ ಈಗ ೮೨ ಮುಗಿದು